ಭೌತರಸಾಯನವಿಜ್ಞಾನ

	ರಾಸಾಯನಿಕ ವಿದ್ಯಮಾನ ಹಾಗೂ ಗುಣಗಳನ್ನು ಅವುಗಳ ತಳದಲ್ಲಿರುವ ಭೌತ ಪ್ರಕ್ರಿಯೆಗಳ ಮುನ್ನೆಲೆಯಲ್ಲಿ ವ್ಯಾಖ್ಯಾನಿಸುವ ಮತ್ತು ಅವುಗಳ ಅನ್ವೇಷಣೆಗೆ ತಂತ್ರಗಳನ್ನು ಅಭಿವರ್ಧಿಸುವ ರಾಸಾಯನವಿe್ಞÁನ ವಿಭಾಗ (ಫಿಸಿಕಲ್ ಕೆಮಿಸ್ಟ್ರಿ). ರಾಸಾಯನಿಕ ಭೌತವಿಜ್ಞಾನ (ಕೆಮಿಕಲ್ ಫಿಸಿಕ್ಸ್) ಇದರ ಒಂದು ಅಂಗ. ಬಿಡಿ ಅಣುಗಳ ಹಾಗೂ ರಖಂ ವ್ಯವಸ್ಥೆಗಳ (ಬಲ್ಕ್‍ಸಿಸ್ಟಮ್ಸ್) ನಡುವಿನ ಕ್ರಿಯೆಗಳಿಗಿಂತ ಹೆಚ್ಚಾಗಿ ಅವು ಪ್ರದರ್ಶಿಸುವ ಭೌತಗುಣಗಳ ವ್ಯಾಖ್ಯಾನ ಹಾಗೂ ವಿಶ್ಲೇಷಣೆ ಇಲ್ಲಿಯ ವಸ್ತು. ಸೈದ್ಧಾಂತಿಕ ರಸಾಯನವಿಜ್ಞಾನ ಇನ್ನೊಂದು ಮುಖ್ಯ ಶಾಖೆ. ಇದು ಅಣುಗಳ ಹಾಗೂ ವ್ಯವಸ್ಥೆಗಳ ಗುಣಗಳನ್ನು ಗಣಿಸುವುದರತ್ತ ಲಕ್ಷ್ಯ ಹರಿಸುತ್ತದೆ. ಶಕಲಬಲವಿಜ್ಞಾನದ ಹಾಗೂ ಸಂಖ್ಯಾಕಲನಾತ್ಮಕ ಉಷ್ಣಗತಿವಿe್ಞÁನದ ತಂತ್ರಗಳನ್ನು ಇಲ್ಲಿ ಬಳಸಲಾಗುತ್ತದೆ. ಭೌತರಸಾಯನವಿಜ್ಞಾನದ ವ್ಯವಹಾರ ದ್ರವ್ಯದ ಈ ಮುಂದಿನ ಮೂರು ಮುಖಗಳ ಜೊತೆಗಿದೆಯೆಂದು ಪರಿಗಣಿಸುವುದು ಅನುಕೂಲ: ದ್ರವ್ಯದ ಸಮತೋಲ ಗುಣಗಳು, ರಚನೆ, ಮತ್ತು ಬದಲಾವಣೆಗೆ ಒಳಗಾಗಬಲ್ಲ ಗುಣ. ಈ ಎಲ್ಲ ವಿವರಗಳನ್ನು ವ್ಯಾಪಕವಾಗಿ ರಸಾಯನವಿಜ್ಞಾನ ಲೇಖನದಲ್ಲಿ ಚರ್ಚಿಸಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ